Index   ವಚನ - 197    Search  
 
ಬಳಿಕ್ಕೆಯುಂ, ವಾಂತವೆ ಸೂಕ್ಷ್ಮ ರುದ್ರಸಂಜ್ಞಿತವಾದಿಕಾರದೊಳ್ಬೆರೆಯೆ ಶಿ ಯೆನಿಸಿತ್ತು. ಲಾಂತವೆ ಅನಂತಾಖ್ಯ ರುದ್ರಸಂಜ್ಞಿಕವಾದಾಕಾರದೋಳ್ಕೂದೆ ವಾ ಯೆನಿಸಿತ್ತು. ಮರುದ್ವಾಚ್ಯವಾದ ಮಾಂತವೆ ಯ ಯೆನಿಸಿತ್ತೀ ಮೂರಕ್ಕಾದಿಯಾದ ನಮಃ ಎಂಬ ಹೃದಯಪಲ್ಲವಂಗೂಡಿ ಪಂಚಾಕ್ಷರಮೆನಿಸಲದು 'ತಾರಾಧ್ಯೇಯಂ ಷಡಕ್ಷರಂ' ಎಂದು ನಿರ್ವಚಿಸಿದೆಯಯ್ಯಾ, ಪರಶಿವಲಿಂಗಯ್ಯ.