Index   ವಚನ - 1    Search  
 
ಉದಯ ತತ್ಕಾಲವೆ ಅಸ್ತಮಯ. ಅಸ್ತಮಾನ ತತ್ಕಾಲವೆ ಉದಯ. ಮಧುವೆ ವಿಷ ವಿಷವೆ ಮಧು. ಪದವೆರಡಕ್ಕೆ ಮಾನಸಿನ ಸಂದೇಹ ಮಾತ್ರ ಕಾರಣ. ಮಧುಸಮುದ್ರ ಲವಣಸಮುದ್ರ ಕ್ಷೀರಸಮುದ್ರ ದಧಿಸಮುದ್ರ. ಚತುರಂಗದೊಳು ಇದು ಸಪ್ತಸಮುದ್ರ. ಏಕೋಮೂಲ್ಯ ಲೋಕಕ್ಕೆ ಭಿನ್ನ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.