Index   ವಚನ - 2    Search  
 
ಮಲಿನವುಂಟೆ ಮಹಾಸಮುದ್ರಕ್ಕೆ ಅರಸಲು ? ಕೊಲೆ ಹೊಲೆ ಉಂಟೆ ಸರ್ವಜೀವದಯಾಳ್ವಂಗೆ ವಿಸ್ತರಿಸಲು ? ಕುಲ ಅಕ್ಕುಲವುಂಟೆ ಋಷಿವರ್ಗದೊಳು ಉಚ್ಚರಿಸಲು ? ಎಲೊತಲೊ ಎಂಬುದುಂಟೆ ಜ್ಞಾನಿ ಸುಖಿಯಲ್ಲಿ ಬೆರೆಸಲು? ಭೇದವುಂಟೆ ಅಗ್ನಿ ಆಪೋಶನಕ್ಕೆ? ನಿರ್ದರುಶನ ಆರಕ್ಕೆ, ಪಿಂಡವೆ ಬ್ರಹ್ಮಾಂಡ, ಪೃಥ್ವಿ ಆಕಾರ ಪ್ರಿಯವೆ ಅಪ್ರಿಯ ಅಪ್ರಿಯವೆ ಪ್ರಿಯಾ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.