Index   ವಚನ - 5    Search  
 
ತತ್ವಭಕ್ತಿ, ತತ್ವಮುಕ್ತಿ, ತತ್ವ ಉತ್ಪತ್ತಿ ಸಾರಾಯ ತತ್ವವೃಕ್ಷದಿಂದ ಪುಟಿದವು. ಎಂಬಸತ್ನಾಲ್ಕು ಲಕ್ಷ ಸಂಕಲ್ಪವೆಲ್ಲ ತತ್ವಾದಿಗಳು. ಯಾತಕ್ಕೆ ಭೇದವ ಮಾಳ್ಪಿರಯ್ಯ? ಪೃಥ್ವಿ ಪೃಥ್ವಿಯ ಕೂಡಿತ್ತು, ಅಪ್ಪು ಅಪ್ಪುವ ಕೂಡಿತ್ತು ವಾಯು ವಾಯುವ ಕೂಡಿತ್ತು. ಅಗ್ನಿ ಅಗ್ನಿಯ ಕೂಡಿತ್ತು ಆಕಾಶ ಆಕಾಶದೊಳು ಸಹಕಾರ್ಯವಾಯಿತ್ತು. ಬೆರೆದಲಿ ಭೇದವಿಲ್ಲದ ಕಾರಣದಿಂದ ಶರೀರ ಭಿನ್ನವಾಗದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.