Index   ವಚನ - 4    Search  
 
ಎನಬಹುದು ಎನಬಾರದು ಜನರಿಂಗೆ. ವೈರವರ್ಗ ಜ್ಞಾನಕ್ಕೆ ವರ್ಗ, ಕನಸಿನೊಳು ಕಾಣಿಸುವುದು; ಮನಸಿನೊಳು ಉಚ್ಚರಿಸಿದಷ್ಟು ನೆನಸಿದರೆ ಬಾಹುದು. ನೇಮದ ನೆಲೆಕಲೆಯನರಿತು, ಅನುಶ್ರುತ ಶಿವಸನ್ನಿಧಿಯೊಳು ಮನವರತು ಇದ್ದರೆ, ಮನ ವಾಚಾಸಿದ್ದಿ, ವಾಚಾ ಮನಸಿದ್ದಿ ಅಪ್ಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.