Index   ವಚನ - 6    Search  
 
ಶರೀರ ಭಿನ್ನ, ಪರಮಾತ್ಮ ಏಕವೆಂಬುದೇ ವೇದವಾಕ್ಯ. ಶರೀರ ಗುಹೇಶ್ವರ; ಈಶ್ವರ ಪರಮಾತ್ಮ ಪರಿಪೂರ್ಣನೆಂಬುದೇ ಭಕ್ತಿವಾಕ್ಯ. ವನಚರವಿದೆ, ಖೇಚರವಿದೆ, ಭೂಚರವಿದೆ ನರರೇನು ಬಲ್ಲರೇಯ್ಯ ನಃಪ್ರತಿಯ ಲಿಂಗಾಂಗವ? ಅರುಹಿನ ತಿರುಳು ಮರಹಿನ ಮರಳು ಕರುಳ ಕಡುಸೂತ್ರ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.