Index   ವಚನ - 10    Search  
 
ದ್ವಂದ್ವವು ಜೀವನ ಕಾಯಕ್ಕೆ ಒಂದಲ್ಲ ಅನಂತ ಆಸ್ಕರ. ಚಂದ್ರಾರ್ಕ ಹುಟ್ಟು ಹೊಂದು ಹೋಪದು ಬಪ್ಪದು. ಒಂದನೆ ತಿಳಿವುದು ಶಬ್ದದಿಂದ ಬೀಜವು. ಮುಂದಣ ಸ್ಥಿತಿ, ಹಿಂದಣ ಭವ ಅಂದು ಇಂದಿಗೆ ಕಾಂಬುದು ಅಗಣಿತ ಅಗಣಿತ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.