Index   ವಚನ - 11    Search  
 
ಬಲ್ಲಹುಕಿಕ್ಕೆ ಮಾತ ಕಲಿತರೇನಯ್ಯ ಬಯಲು ಬೊಮ್ಮದ? ಮೇಲೆ ದಯಮಾತಿನ ಮಾಲೆಯೊಳು ಘಾತಕವಿಪ್ಪುದು. ಹಲ್ಲು ಕಿರಿವರು ಕನ್ನಡಿಗಿದಿರು, ಕನ್ನಡಿ ಕೊಡುವುದೆ ಕಳೆಯ ಅವಕಳೆಯ? ಅಲ್ಲದೆ ಮಾತು ಅಲಗಿನ ಗಾಯ, ಬೆಲ್ಲದ ಮಾತು ಭಲ್ಲೆಯ ಗಾಯ ಎಲ್ಲರು ಮಾತಿನಿಂದಲಿ ಮರಣವಾದರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.