Index   ವಚನ - 12    Search  
 
ಮಾತೇ ಮಂತ್ರ ಮಾತೇ ತಂತ್ರ ಮಾತೇ ಯಂತ್ರ ಮಾತಿನಿಂದಲೆ ಮಥನವು ಮರಣವು. ಮಾತು ತಪ್ಪಿ ಆಡುವಂಗೆ ಆತ್ಮಲಿಂಗವೆಲ್ಲಿಹುದೊ? ಪೇತು ಲಿಂಗಸಂಸ್ಕಾರಿ ಎಂಬವ ಮಾತಿಗೆ ತಪ್ಪುವ. ಭೂತಪ್ರಾಣಿ ಲಿಂಗಪ್ರಾಣಿ ಅಪ್ಪುದೆ ಬುಲ್ಲಣಿ ಮಾತಲಿ ? ನೀತಿ ನಿರ್ಣಯವೆ ಸದಾಚಾರ. ಯಾತನಾ ಶರೀರಕ್ಕೆ ಅಳವಡದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.