Index   ವಚನ - 28    Search  
 
ವ್ರತಸ್ಥ ವ್ರತಸ್ಥರೆಲ್ಲ ಗತಿಯನು ಕಾಣದೆ ಭ್ರಾಂತುಗೇಡಿಗಳಾದರಯ್ಯ. ಪ್ರತಿಗೆ ಪ್ರತಿ ಗುರುವೆನಬಹುದೆ? ಪ್ರತಿಗೆ ಪ್ರತಿ ಲಿಂಗವೆನಬಹುದೆ? ಪ್ರತಿಗೆ ಪ್ರತಿ ಜಂಗಮವೆನಬಹುದೆ? ಎಂದ ಕಾರಣದಿಂದಲಿ ಮತಿ ತಪ್ಪಿ ಮೂರ್ಖರಾದರು. ಸರೀಕರೆಂಬುತ ಅತಿಪ್ರಕಾಶವಡಗಿತ್ತು, ಮನದೊಳು ಸಂಚಲ ಪುಟ್ಟಿತ್ತು, ಕೃತಯುಗ ಹೇಮ, ತ್ರೇತಾಯುಗ ಬೆಳ್ಳಿ, ದ್ವಾಪರ ತಾಮ್ರ ಕಲಿಯುಗಕ್ಕೆ ಕಲ್ಲಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.