Index   ವಚನ - 27    Search  
 
ಮಾಡುವುರೆ ಮಾಟದಂತೆ ಅಲ್ಲವು, ಕೂಡುವರೆ ಕೂಟದಂತೆ ಅಲ್ಲವು, ಕೃಪೆಯಿದು ಲಿಂಗದೊಳು ನೋಡುವರೆ, ಕಂಗಳು ಇಲ್ಲದ ತ್ರಿವಿಧಸೂತ್ರವು, ನೀಡಿ ನೀಡಿ ನಿಜವಲ್ಲದೆ ಕೆಟ್ಟಿತ್ತು, ಮಾಡಿ ಮಾಡಿ ಮನವಿಲ್ಲದೆ ಕೆಟ್ಟಿತ್ತು ಆಡಿ ಆಡಿ ಅರ್ಥವೆ ಹೋಯಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.