Index   ವಚನ - 63    Search  
 
ಅಂಕಿತನಾಮದಿಂದ ಶಂಕರ, ತಾಳ್ವ ಸಜೀವಿ ನಿರ್ಜಿವಿ ಪಂಕಜ ಕಮಲದಲ್ಲಿ ಆತ್ಮಭಸಿತ, ಅಪಾದಮಸ್ತಕ ವಿಭೂತಿ ಭಸ್ಮಾಂಗಿ, ಕಂಕಣ ಸ್ಥಾನಸ್ಥಾನದಲ್ಲಿ ಕರಪಾತ್ರೆ ಶಿರಮಾಲೆ, ಅಂಕದ ಕಣದೊಳು ಮೆಟ್ಟಿ ತುಳಿದವರ ಬಿಟ್ಟಾಡಿ ರಕ್ಷೆ, ಲೆಂಕರ ಲೆಂಕನೆಂಬ ಕಾರಣಾರ್ಥ ಶಂಕರ ಸದ್ಭಕ್ತಗೆ ಸಲ್ವುದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.