Index   ವಚನ - 62    Search  
 
ಸಹಸ್ರನಾಮ ಭಕ್ತಂಗೆ ಸಲ್ಲುವುದಲ್ಲದೆ ವಸ್ತುವಿಂಗೆ ಸಲ್ಲದು ಆ ಭಕ್ತ ನಾಮರಹಿತ, ವಸ್ತು ನಾಮವಿರಹಿತ ದಾಸೋಹ ಕೊಂಬುವಾತ, ಅಂತರಂಗಿ ನಿರಂಗಿ ನಿಶ್ಯಬ್ದಬ್ರಹ್ಮ. ದೇಶಾಂತರ ಚರಿಸುವ ಉಚ್ಚರಿಸುವ ನಿಶ್ಚಿಂತ. ನಿರಾಳವಾಸಕ್ಕೆ ನಾಮವಿಟ್ಟು ಕರೆವರೆ? ಪುತ್ರ ಮಿತ್ರ ಕಳತ್ರಯಂಗಳು ದೋಷ ದ್ರೋಹಂಗಳು. ಬೈವೊಡೆ ಹೊಯ್ದೊಡೆ ಈಶ್ವರ ಬಹನೆ? ಏಸೋ ಲಕ್ಷೋಪಲಕ್ಷ ವೃಕ್ಷ ಬೀಜದಿಂದ, ಆ ಬೀಜ ವೃಕ್ಷದಿಂದ. ಸಹಸ್ರನಾಮ ಭಕ್ತಂಗೆ ಹೆಸರಿಟ್ಟು ಅಂಗಲಿಂಗವಾದ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.