Index   ವಚನ - 65    Search  
 
ವಚನವಂ ಕಲಿತು ರಚಿಸುವ ರುಚಿಕರವೆಂತು ಕುಶಲರಿಗೆ? ಕುರೂಪು ರೂಪು ಆಹುದೆ? ಅಚಲರ ಭಕ್ತಿ ಆಳವಟ್ಟೀತೆ ಅವರಿಗೆ? ನೀಚಸ್ಥಲದವರು ಕೋಟಿ ವಚನವ ಕಲಿತರೇನು ವಚನದಂತೆ ಇಹರೆ? ಅಚಿತ ಅಚಿತ ಆನಂದ ಆಗಮದಂತೆ, ವಚನ ವಚನದಂತೆ ತಾ ತನ್ನಂತೆ. ವಚನದ ಶ್ರುತಿ ಅಜಾತರಿಗಲ್ಲದೆ ಅಳವಡದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.