Index   ವಚನ - 66    Search  
 
ಪುರಾಣವ ಕಲಿತು ಪುಂಡರ ಸಂಗವ ಮಾಡಿದಂತೆ, ಪರೀಕ್ಷಿಸಿ ಪ್ರವರ್ತನೆಯಿಲ್ಲದಿರೆ ಪರವರ(ಪ್ರವರ?) ಮಾಡಿದಂತೆ. ಪರರಲ್ಲಿ ಪ್ರತಿ ಅರ್ಥವಂ ಕೊಚ್ಚಿ, ದ್ರವ್ಯವಂ ತಂದು. ಬಿರಿದಿಗೆ ಉದಾರತ್ವವ ಬೀರಲು ಸೆರೆ ಆಗದೆ ಬಾಳ್ವನೆ? ಮುರುಕವ ಮಾಡುವ ಮೂರ್ಖರಿಗೆ ಮುಕ್ತಿಯಿಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.