Index   ವಚನ - 67    Search  
 
ಲಿಂಗದ ಬೆಳೆಗೆ ಅನಂಗದೊಳರಿಯದೆ ಅಂಗೀಕರಿಸುವರು. ಮತ್ತೆ ಆಗಮಶ್ರುತಿಯ ಭಂಗಿತರು ಮೂಲಂಗಿಯ ಮೇದಂತೆ, ನುಂಗದೆ ಬೇಹುದೆ? ಲಿಂಗಾಂಗದ ಮೂಲವನರಿವುದು ಅನಂಗಿಗಹುದೆ? ಲಿಂಗಾಂಗಿಯ ನಡೆನುಡಿ ಚೈತನ್ಯ ಸರ್ವಾಂಗಲಿಂಗಮಯ. ಹಂಗಿನ ಕಟ್ಟೊಡೆದು ಕಾಬುದು ಕರುಣಕೃಪೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.