Index   ವಚನ - 98    Search  
 
ಹೊಲೆ ಹದಿನೆಂಟು ಜಾತಿನೆನಿಸಿ, ಕುಲಕಾಯಕ, ಹಲವು ಉದ್ಯೋಗವಂ ಮಾಡಿ, ಮಾಂಸಪಿಂಡ ಮಂತ್ರಪಿಂಡವೆಂಬುದಕೆ ಕುರುಹು ಯಾವುದೆ? ಹೊಲೆ ಮೊದಲೆಂಬುದೆ ಮಂತ್ರಪಿಂಡ; ಕೂಟ ಮೊದಲೆಂಬುದೆ ಮಾಂಸಪಿಂಡ. ಹೊಲಿದ ಪಾದರಕ್ಷೆ ಅಪಾದ ಮಸ್ತಕದಿಂ ಹುದುಗು. ಎಲುವಿನ, ಮೂಳೆ ಮಾಂಸದ ಮಾಟ, ರಕ್ತದ ಕೊಣ ನರದ ಹಂಜರ, ನಾನವಿಧದ ಕ್ರಿಮಿಕೀಟ ಕುಲ ಮೊದಲ್ಯಾವುದು ಕಡೆ ಯಾವುದು? ವರ್ಣಾಶ್ರಮಕ್ಕೆ ಫಲವದರಿಂದ. [ಫಲ]ನಿಃಫಲವಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.