Index   ವಚನ - 97    Search  
 
ರೂಪುಸಂಪನ್ನನಾದಡೇನಯ್ಯ? ಸ್ತ್ರೀಯರಿಗೆ ಭಾಜನವಾಯಿತ್ತು. ಗುಣಸಂಪನ್ನನಾದಡೇನಯ್ಯ? XXX(ಪುಣ್ಯ?) ಭಾಜನವಾಯಿತ್ತು. ದ್ರವ್ಯಸಂಪನ್ನನಾದಡೇನಯ್ಯ? ರಾಜಭಾಜನವಾಯಿತ್ತು. ಖಡ್ಗಸಂಪನ್ನನಾದಡೇನಯ್ಯ? ರಣಾಗ್ರಕೆ ಭಾಜನವಾಯಿತ್ತು. ತ್ಯಾಗಸಂಪನ್ನನಾದಡೇನಯ್ಯ? ಯಾಚಕರಿಗೆ ಭಾಜನವಾಯಿತ್ತು. ಬಸವಣ್ಣ ನಿಮ್ಮ ಭಕ್ತಿಸಂಪನ್ನನಾದ ಕಾರಣದಿಂದ, ಸ್ವಯಲಿಂಗಿಯಾದನು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.