Index   ವಚನ - 99    Search  
 
ಸೂತಕವೆಂದಲ್ಲಿ ಪಾತಕ ಹೊದ್ದುವುದೇನಯ್ಯ? ಮಾತೆಯ ಗರ್ಭದೊಳು ಮಾಂಸ ಹೊಲೆ ಅಸ್ಥಿ ಮಾಂಸ ಹೊಲೆ, ರಕ್ತ ಮಾಂಸ ಹೊಲೆ ಚರ್ಮಮಾಂಸ ಹೊಲೆ, ರೋಮ ಈ ತನುಮಾಂಸ ಹೊಲೆ ತ್ರಿಮಾಂಸ ಹೊಲೆ. ರೂಪುಲಾವಣ್ಯ, ಸೂಸಕದ ಮುದ್ದೆ, ಪಾತಕದ ಗಟ್ಟಿ ಇದಕೆ ಯಾತರ ಕುಲವೊ? ರಾತ್ರಿ ಒಂದು, ದಿನ ಒಂದು, ಹೆಣ್ಣೊಂದು ಗಂಡೊಂದು ಬಾಹತ್ರ(ಬಹುತರ?) ಕೊಡಿ ಬಲ್ಲೆ ಬಲ್ಲೆನೆಂದು ಹೋರಿ ಕೆಡುವುದು. ಮಾತನಾಡಲಿಕೆ ತೆರಪಿಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.