Index   ವಚನ - 100    Search  
 
ನೂರೊಂದು ಕುಲಕಾಯಕ, ಸರ್ವರಿಗೆ ಬೇಕಾಗಿಹುದಯ್ಯ. ಬೇರೊಂದನು ಬಿಟ್ಟು, ಇಲ್ಲದ ಭೇದವ ಮಾಡುವರೆ? ಕಾರ್ಯವೊಂದಕೆ ಅಧಿಕ ಕಾರಣವದು[ಆಗಿ], ಮಾರಿಕೊಳ್ಳಬೇಕಾಯಿತು. ನೂರೊಂದು ಕುಲಕಾಯಕವನೊಂದು, ಸರ್ವವ ಹೊಂದು. ಯಾರಾದರಾಗಲಿ ಕುಲವ ಜರೆವುದು, ಕುಲದ ಹಂಗ ಬಿಡುವುದು ಮೋರೆಯ ಮುಚ್ಚಿದರೇನು ಅಯ್ಯ? ಮೂಗಿನಲಿ ಹೋಗುವುದು ದುರ್ವಾಸನೆ. ಚಾರ್ವಾಕು ಮಾತ್ಯಾಕೆ, ಮುಕ್ತಿಯಿಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.