ನೂರೊಂದು ಕುಲಕಾಯಕ,
ಸರ್ವರಿಗೆ ಬೇಕಾಗಿಹುದಯ್ಯ.
ಬೇರೊಂದನು ಬಿಟ್ಟು, ಇಲ್ಲದ ಭೇದವ ಮಾಡುವರೆ?
ಕಾರ್ಯವೊಂದಕೆ ಅಧಿಕ ಕಾರಣವದು[ಆಗಿ],
ಮಾರಿಕೊಳ್ಳಬೇಕಾಯಿತು.
ನೂರೊಂದು ಕುಲಕಾಯಕವನೊಂದು,
ಸರ್ವವ ಹೊಂದು.
ಯಾರಾದರಾಗಲಿ ಕುಲವ ಜರೆವುದು,
ಕುಲದ ಹಂಗ ಬಿಡುವುದು
ಮೋರೆಯ ಮುಚ್ಚಿದರೇನು ಅಯ್ಯ?
ಮೂಗಿನಲಿ ಹೋಗುವುದು ದುರ್ವಾಸನೆ.
ಚಾರ್ವಾಕು ಮಾತ್ಯಾಕೆ, ಮುಕ್ತಿಯಿಲ್ಲ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Nūrondu kulakāyaka,
sarvarige bēkāgihudayya.
Bērondanu biṭṭu, illada bhēdava māḍuvare?
Kāryavondake adhika kāraṇavadu[āgi],
mārikoḷḷabēkāyitu.
Nūrondu kulakāyakavanondu,
sarvava hondu.
Yārādarāgali kulava jarevudu,
kulada haṅga biḍuvudu
mōreya muccidarēnu ayya?
Mūginali hōguvudu durvāsane.
Cārvāku mātyāke, muktiyilla kāṇā
ele nam'ma kūḍala cennasaṅgamadēvayya.