Index   ವಚನ - 101    Search  
 
ಹೊರಗು ಒಳಗು ಎಂಬ ಮರವೆಯ ಮನುಜರೆ ಕೇಳಿರೊ: ಹೊರಗು ಜನನ ಮರಣಕ್ಕೆ. ಹೊನ್ನು ಹೆಣ್ಣು ಮಣ್ಣು ತ್ರಿವಿಧಕ್ಕೆ. ಪರಕೆ ಪರವಸ್ತ್ರ ಹೊರಗೆ. ಹೊರಗಾದವರ ಹೊರಗೆಂಬುವುದೆ ಸದಾಚಾರ. ಒಳಗಾದವರ ಹೊರಗೆಂಬುವುದೆ ಅನಾಚಾರ. ಹೊರಗು ಒಳಗೆಂಬ ಉಭಯದ ಮಧ್ಯವ, ಮರವೆಯ ನರರೇನು ಬಲ್ಲರಯ್ಯ ಸದಾಚಾರದ ಕೊನವ? ಹೊರಗಾದಾತ ಶಿವಭಕ್ತಿ, ಭಕ್ತಿಗೊಳಗಾದತ ಶಿವ. ಹೊರಗೆಂಬುದು ಒಳಗುಂಟು, ಒಳಗೆಂಬುದು ಹೊರಗುಂಟು. ಅರುಹು ಜ್ಞಾನ, ಉಭಯದ ಮಧ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.