ದರ್ಪಣವ ನೋಡಿ ಅರ್ಪಣೆಯ ಕಾಂಬುದು.
ಗುಪ್ತದಲಿ ಅಲಂಕಾರವ ಕಂಡು ಗೃಹಸೌಖ್ಯ ಮಾಡುವುದು.
ಸುಪ್ಪಾಣೆ ಮುಕ್ತಕ, ಸೂತ್ರವೆ ನೇತ್ರ, ಶುದ್ಧ ಪ್ರತಿ
ಅಪ್ಪುವೆ ಆದಿ ಆಧಾರ, ಅಲಂಕಾರದ ಪ್ರತಿಬಿಂಬ
ಕರ್ಪುರ ಕರಂಡದೊಳು ಇದ್ದು ಬಯಲಾದಂತೆ;
ತಪ್ಪದು ಸಂಗಯ್ಯನ ಸರಣರೆಗೆ ಐಕ್ಯಪದ.
ಇಪ್ಪುದು ನಿಮ್ಮ ಸನ್ನಿಧಿ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.