Index   ವಚನ - 139    Search  
 
ರೂಪ, ರಸ, ಗಂಧ, ಶಬ್ದ, ಸ್ಪರ್ಶದಲ್ಲಿ ಆ ಪರಮಾರ್ಥಗೆಂದು ಅರಿದು ಅರ್ಪಿಸುವಲ್ಲಿ ಉಪಾಯ ಉಪಚಾರ, ಉತ್ತರ ಪ್ರತ್ಯುತ್ತರ ಸಾಧನ, ಕೋಪ ಕ್ರೋಧಾದಿಗಳ ಕೊನೆಯಂಚಲಿ ಹುಟ್ಟುವ, ಆಪತ್ಕಾಲ ಸಂಪತ್ತೆಂಬ ಎರಡು ತೆಗ್ಗು ತೆವರ ಸವನ ಮಾಡುವುದು. ಪಾಪಪುಣ್ಯವೆಂಬ ಎರಡರ ಸಂದೇಹವ ಸುಟ್ಟು, ಬಯಕೆಬಿಟ್ಟರೆ ಸೋಪಾನ; ತನ್ನ ಇರವೆ ಕೈಲಾಸ. ಇತ್ತಲತ್ತಲಿ ಒಂದೆ ಪರಮಾರ್ಥ, ಭಕ್ತಿಪದಕೆ ಮುಕ್ತಿ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.