Index   ವಚನ - 175    Search  
 
ಬಸವನೆಂದು ಪಾಷಾಣ ಹೊಂದಿಸುವ ಅನ್ಯಾಯಿಗಳಿಗೆ ಎಂತಹುದು ಮುಕ್ತಿ? ಮುಸುಕಿಪ್ಪ ಮಂಜು ಹರಿವನಕ ಮೂರ್ತಿಯು ಕಾಂಬುದೆ? ಬಸವನ ನೋಡುವರೆ ಭಕ್ತಿಯೊಳು ಭಕ್ತಿಯ ನೋಡುವರೆ ಶಿವನೊಳು [ನೋಡುವುದು] ಹುಸಿ, ಹಿಂದಕ್ಕೆ ಎಂದಾದರೂ ಪಾಷಾಣವಾಗಿ ಬಂದಿದ್ದರೆ ಎನ್ನ ಗುರು ಸಂಗಮೇಶ್ವರನ ಸ್ತುತಿಯೊಳಗಿಪ್ಪರು ಬಸವನತೀತ ಅಹುದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.