ವಿಭೂತಿ ಭೂಷಣ, ಅಂಗವಿಕಾರಿಗೆ ಅಳವಡುವುದೆ?
ವಿಭೂತಿ ತೀರ್ಥದಲ್ಲಿ ಮರ್ದಿಸಿ ತ್ರಿಕಾಲವೇಧಿಸಿ
ತ್ರಿಭುನೋಪಾದಿ ತ್ರಿಸಂಧಿ ಕಾಲಕಲ್ಪನೆಯಲ್ಲಿ
ತ್ರಿಭೂತ ಅತ್ಮಂತರಾತ್ಮ ಅನರ್ಘ್ಯ ಆತ್ಮ
ಅರ್ಭೂತ ಅರ್ಭೂತ ಊರ್ದ್ವದಲ್ಲಿ
ಓಂಕಾರಪ್ರಣಮದಿಂದ ಭವಭಸಿತ ಭಕ್ತದರುಶನ ನಿರ್ದರುಶನ
ವಿಭೂತಿಯ ಜೋತಿರ್ಮಯ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Vibhūti bhūṣaṇa, aṅgavikārige aḷavaḍuvude?
Vibhūti tīrthadalli mardisi trikālavēdhisi
tribhunōpādi trisandhi kālakalpaneyalli
tribhūta atmantarātma anarghya ātma
arbhūta arbhūta ūrdvadalli
ōṅkārapraṇamadinda bhavabhasita bhaktadaruśana nirdaruśana
vibhūtiya jōtirmaya kāṇā
ele nam'ma kūḍala cennasaṅgamadēvayya.