Index   ವಚನ - 196    Search  
 
ಅಂದು ಕಲ್ಯಾಣದೊಳು ಜಂಗಮಾರ್ಚನೆ ಎಂದು ಕುಂದಿನ ವಾಕ್ಯಕ್ಕಾಗಿ ತಂದಿಟ್ಟನು ಪ್ರಭು ನಿಂದೆ ಸ್ತುತಿಯ. ಉದಾಸದೊಳಗಿದ್ದ ಸತಿಯ ಮಾನ ಹಾನಿಯಾಯಿತು, ಮುಂದೆ ಅನಾಚಾರಿಯೆಂದು ನಾದವೇರಿತು. ಚಂದ್ರಾರ್ಕ ಸಾಕು ಸಾಕು ಎಂಬ ಸೋಂಕು ಮಾತ್ರದಿಂದ ಐಕ್ಯ ಸ್ಥಲವಾಯಿತು ಕಾಣಾ, ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.