Index   ವಚನ - 195    Search  
 
ಹೋಲುವೆಗೆ ಹೋಲುವೆ ಹೊಲೆ ಹುಸಿ ನಿಲೆಶಿಲೆ, ಮೇಲುವ್ರತವಲ್ಲ ಮಿಸುರಾರ್ಪಣೆ ಇಲ್ಲ, ಬೇಲಿಯೊಳಗಣ ಇಲಿ ಸರುವಿನಂತೆ ಭೇದಾಭೇದ್ಯವು. ಕೋಲುಸಾಧನೆಯ ಖರ್ಗದ ಸಾಧನೆ ಎನಬಹುದೆ? ಬಾಲತ್ವ ಮೊದಲು ಕಟ್ಟಿ ಬಿಟ್ಟು ಪಡೆವುದೇನು? ಸಾಲಾವಳಿ ಸಾವಿರವರ್ಷದ ಸಂಬಂಧ, ಹಾಲೊಳು ಹುಳು ಬಿದ್ದಂತೆ ಆಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.