Index   ವಚನ - 197    Search  
 
ಆಚಾರಸ್ಥಲಕ್ಕೆ ಜಂಗಮಸ್ಥಲ ಅಗೋಚರ ಅಪ್ರಮಾಣ. ಖೇಚರಕ್ಕೆ ಎಷ್ಟರ ಅಭ್ಯಂತರ? ನಾಚರು ನಾವು ಜಂಗಮವೆಂಬ ಅಣ್ಣ[ಗಳು], ಸಾಕ್ಷಾತ್ ಜಂಗಮವ ಯೋನಿಜ ಎಂದರೆ ಅಘೋರ ನರಕ. ಆಚಾರ ಅದರಿಂದ ಅನಾಚಾರವಾಯಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.