Index   ವಚನ - 198    Search  
 
ಅಜಾತ ಅನಂಗವೇಷ ಜಂಗಮ ಪ್ರಭು, ಮೂಜಗಭರಿತ ಬಂದುದ ಮುಂದುಗಾಣದೆ ಕೆಟ್ಟಿತ್ತು. ಯೋಜನಪ್ರಮಾಣದಲ್ಲಿ ಬರಲಾಗಿ ಅರುಹು ಪ್ರಕಾಶವಾಯಿತ್ತು. ಸಹಜಗೆ ಮುಕ್ತನಾದ, ಅಸಹಜನೆ ಅಭೋಜ್ಯವಾದ. ಬೀಜ ಅದರಿಂದಲಿ ನಾಶವಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.