Index   ವಚನ - 207    Search  
 
ಪ್ರಾಣಲಿಂಗದ ಪ್ರಸನ್ನವ ಅಣೆಕಾರರಲ್ಲದೆ, ಅಜ್ಞಾನಿಗಳೆತ್ತಬಲ್ಲರಯ್ಯ? ವೇಣಿಯೊಳಗಣ ಕಸ್ತೂರಿ ಅನ್ವಯವ, ವೇಷದಾರಿಗಳು ಬಲ್ಲರೆ? ನಾಣ್ಯವು, ನಾಲ್ಕು ಯುಗದಲ್ಲಿ ಇಲ್ಲದ ನಡೆಗುಣವ ತಂದು ವಾಣಿಜನ ಕೈಯ[ಲಿ] ಬೆಲೆಯ ಕಟ್ಟಿಸಿ[ದಂತೆ], ಜಾಣ ಕೂಡಲಸಂಗಶೆಟ್ಟಿ ಪ್ರಾಣಲಿಂಗಸಂಬಂಧವಾದ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.