Index   ವಚನ - 212    Search  
 
ಮಿಥ್ಯವಾದ ಆರು ದರುಶನಕ್ಕೆ ಭಕ್ತಿದೂರ. ಎತ್ತಣ ದೇಶದಲ್ಲಿ ಹುಟ್ಟಿ, ಎತ್ತಣ ದೇಶ ಮುಟ್ಟಿದರೇನು, ಮೃತ್ಯುವಪ್ಪ. ಮೃತ್ಯು ಒಯ್ಯುವುದು, ತನ್ನ ಮಿಡಿಕಿಸಿ ಕೊಲ್ಲುವುದಕ್ಕಾಗಿ ಗತಗುಣಿಯೊಳಗಣ ಹುಳು ಸತ್ತಂತೆ ಆಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.