Index   ವಚನ - 211    Search  
 
ಇಂದ್ರಜಾಲ ಮಹೇಂದ್ರಜಾಲ ದೂರ ಶ್ರವಣ. ದೃಶ್ಯ ಶ್ರವಣ, ದೃಶ್ಯ ಅದೃಶ್ಯಾದಿಗಳು ಪ್ರಾರಬ್ದ ವಿದ್ಯಯಿಂದ ಪ್ರಕೃತಿ ಭಿನ್ನ, ಅಘೋರ ನರಕ ಗುರುಕೃಪೆ ಇಲ್ಲ ಊರೂರು ತಿರುಗುವುದು ಆರು ದರುಶನಕ್ಕೆ; ಸೇರದು ಚತುರ್ವಿಧ ಪದ ಸದ್ಗತಿಯಲ್ಲ ದೂರವು, ನಿಮ್ಮ ಪಾದ ದೊರಕೊಳ್ಳದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.