Index   ವಚನ - 213    Search  
 
ಯೋಗಿ ಜೋಗಿಗೆ ಮಿಥ್ಯ, ಜೋಗಿ ಶ್ರವಣಕ್ಕೆ ಮಿಥ್ಯ. ಆಗ[ಲೆ] ಹುಟ್ಟುವ ಆರು ದರುಶನಕ್ಕೆ ದರುಶನವೆ ಮಿಥ್ಯ. ಬೇಗ ತಮಗೆ, ಒಂದು ರೂಪವೆಂಬುದು ಅಪವಾದ ಹಂಗು. ನೀಗಿತ್ತು ಜನ್ಮ, ತಮ್ಮ ನಿರ್ದರುಶನ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.