Index   ವಚನ - 214    Search  
 
ಖಂಡಣೆ ದಂಡಣೆಯಿಂದ ಭಂಡ ಅಪ್ಪುದು, ತಪ್ಪದ, ತನ್ನ[ದ] ಸಂಶಯ. ಉಣ್ಣದೆ ಉಪವಾಸಿಯಲ್ಲ, ಬಳಸಿ(ಬಳಸದೆ?) ಸುಖಿಯಲ್ಲ; ಬ್ರಹ್ಮಚಾರಿಯಲ್ಲ. ಮಂಡೆಯ ತಿಟ್ಟಕ್ಕೆ ಬೋಳ, ಕುಂಡೆಯ ತಿಟ್ಟಕ್ಕೆ ಕಚ್ಚುಟ ಹಂಡಿಗನ ವಗತನಕ್ಕೆ ಹೆಂಡಿರು ದೂರ. ಕೊಂಡ ಸಾಲ ಕೊಡವುದಕ್ಕೆ ಊರು ದೂರ. ಹೆಂಡ, ಸುರೆಮಾಂಸ, ರೂಪವಂತಳು; ಶಾಪ ತದ್ಗತವಾಯಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.