Index   ವಚನ - 266    Search  
 
ಷಡುಸ್ಥಲದ ಮಾರ್ಗವು, ಪೊಡವಿಯೊಳು ಪೋಲು ಪಟಂತ್ರಕ್ಕೆ ಅಪ್ಪುದೇನಯ್ಯ? ಕಡು ಶಾಸ್ತ್ರಕ್ರಮಮಂ ನುಡಿವರೆ ಕಾರಣವಾಹುದೇ ಬಡಮನ ಭಕ್ತಿಭ್ರಷ್ಟ ಬಾಹ್ಯರವಪ್ಪುದು. ನುಡಿಯಿಲ್ಲದ ನಡೆ, ನಡೆಯಿಲ್ಲದ ನುಡಿ ಎಡಗಾಡು ಕುಭಾವ ಜಡಜೀವನಕ್ಕೆ ಷಡುಸ್ಥಲ ಅಸಾಧ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.