Index   ವಚನ - 265    Search  
 
ಇಂತಿರೆ ಭಕ್ತ, ಇಂತಿರೆ ಮಹೇಶ್ವರ ಇಂತಿರೆ ಪ್ರಸಾದಿ, ಇಂತಿರೆ ಪ್ರಣಾಲಿಂಗ ಇಂತಿರೆ ಶರಣ, [ಇಂತಿರೆ ಐಕ್ಯ] ಇಂತಿರೆ ನಡೆನುಡಿವಿಡಿಭಾವ. ಇಂತರ್ಗೆ ಅಹುದು, ಇಂತರ್ಗೆ ಇಲ್ಲ ಅಂತರ್ಗೆ ಹಿಂಸಾ ಆಸಾಧ್ಯ ಅಸಾಧ್ಯವು. ಅಂತರ್ಗೆ ಈ ಮಾರ್ಗ ಅಕಲ್ಪಿತ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.