Index   ವಚನ - 286    Search  
 
ಭುವನದ ಪೊಂದಿದ ಕಾಮರನೆಲ್ಲ[ವು] ಪರಿಮಳವಪ್ಪುದೆ? ಭಾವಜ್ಞರ ಪೊಂದಲು ಭವಿಗಳು ಭಕ್ತರೆ ಎಲ್ಲ? ಸೇವಯು ಗುರು ಸೋಹಂಭಾವವು ಭವಿ ಹಿಂಗುವರೆ? ಈವ ಗುರು ಗುಹೇಶ್ವರನು ಇಂತಪ್ಪ ಪದಗಳು. ತಾವಾರಯ್ಯ, ತಮ್ಮಿಂದ ಅಹುದೆ ಸೇವೆ? ಶಿವಶರಣ ಕಿಂಕುರ್ವಾಣನೆಂದು ಕಾಂಬುದು ಕಾರಣ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.