Index   ವಚನ - 285    Search  
 
ಹೆಣ್ಣು ಕುಲವ ನುಂಗಿತ್ತು, ಹೊನ್ನು ಛಲವ ನುಂಗಿತ್ತು, ಮಣ್ಣು ಮಾನವ ನುಂಗಿತ್ತು, ಎಣ್ಣೆಯೊಳು ಬಿದ್ದಂತೆ ಆಯಿತ್ತು. ಆಸ್ಕರನ ವೇಷ, ಬಣ್ಣ ಭಜನೆಯ ನುಂಗಿ ಬಹು ಮಾನ ಹೋದುದು. ಬಸವಪ್ರಿಯ ಕೂಡಲ ಚೆನ್ನಸಂಗಮನಾಥನು ತಾನು ತಾನಾಗಿ ತೃಪ್ತಿವಡೆಯಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.