Index   ವಚನ - 296    Search  
 
ಲೀಲೆಯೊ ಶಿಲೆಯೊ ಕಾಲಕ್ರಮ. ಪಾಲುಂಡವರು ಮೇಲುಂಬರೇನಯ್ಯ? ಹೋಲು ಹುಸಿದರೆ ನಿಜನಿಷ್ಠೆ ಆಹುದೆ? ಜಾಲಗಾರ ಜಲವ ಶೋಧಿಸಿ ಹೊಟ್ಟೆ ಹೊರೆವ ವಾಲಯವು ಆಂತು ಅಕ್ಷೇಪ ನಿಲೆಶಿಲೆಗೆ ಸೋಲು, ಸರ್ವಸಮಸ್ತಕೆ ಲೀಲೆ ಗುರುಗುಹೇಶ್ವರನ ಅರ್ಚಿಸೆ, ಭಕ್ತಿಯಫಲ ಪಾಳಕರಲ್ಲದೆ ಅರಿಯರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.