ಅಂತರ್ವೇಷ ಅಸ್ಕರರಿಗೆ ಎಂತಿಪ್ಪುದಯ್ಯ ಭಕ್ತಿ
ಸಂತೋಷ ಪರರ ಅಶನವಿಕಾರ ಪಾಷಾಣವ ಬಿಡಿಸಿ
ಅಂತು ಗುರುಹಿರಿಯತನ ಅನೀಚ ನೀಚವು
ಸಂತೆಯೊಳು ಗಂಟಿಚೋರಕ ನರೆದಂತೆ
ಬೆಂತು ಮನೆ ಬೇಯವ ಮನೆ ತಿರುಗುವ ಬೇಹಾರಿಗಳಿಗೆ
ಸಂತು ಸಂತಾನವಿಲ್ಲ, ಅವರ ಒಡವೆಗೆ ಹುಟ್ಟುವ
ಇಂತರ್ಗೆ ನರಕ ತಪ್ಪುದು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Antarvēṣa askararige entippudayya bhakti
santōṣa parara aśanavikāra pāṣāṇava biḍisi
antu guruhiriyatana anīca nīcavu
santeyoḷu gaṇṭicōraka naredante
bentu mane bēyava mane tiruguva bēhārigaḷige
santu santānavilla, avara oḍavege huṭṭuva
intarge naraka tappudu kāṇā
ele nam'ma kūḍala cennasaṅgamadēvayya.