Index   ವಚನ - 341    Search  
 
ಶ್ವಾನಜನ್ಮದ ಬಲ್ಮೆಯೊ ಕೊನವದು ಹುಸಿಗೆ ಹರಿವುದು ನಿಜದಲ್ಲಿ ನಿಲ್ಲದು, ಧ್ಯಾನದೊಳು ಜ್ಞಾನದ ಚಟಪಟ ತಾನು ಏಳುವುದಕೆ ಮನವದು ಹೊರಗೆ ಸುಳಿಯಲು ಅರಿವುದು ಒಳಗೆ ಶೂನ್ಯವ ತನಗೆ. ಕಾಮದ ಕಳವಳ ಹರುಷಾದಿಗಳಿಗೆ ಒಮ್ಮನವ ಏನು ಕಲ್ಪಿಸಿದೆಯಯ್ಯ ಈ ನರಜನ್ಮವ! ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.