Index   ವಚನ - 342    Search  
 
ಗುಣಕ್ಕೆ ಬಾಲವ ಬೀಸುವರು, ಗುಣ ಕಾಲೊಳು ಉಣಗಲಿತ[ವ]ರು ನಾಲಗೆಯಿಂದ ರುಚಿಗಳ ಸ್ವಾದವ. ಕ್ಷಣದೊಳು ಓಂಕಾರವು, ಅರ್ಚನೆ ವಂದನೆ ಸ್ವಾಮಿಗೆ ಒಣಗಿ ಸತ್ತರೆ ಸಾವುದಲ್ಲದೆ ಒಡೆಯನ ಮನೆಯ ಬಿಡುವುದೆ? ಪ್ರಾಣದಾಶೆಯಿಲ್ಲದಿರೆ ಶವಕ್ಕೆ ಬಿಟ್ಟರೆ ಗುಣವೆಷ್ಟು ಅರಿವು ವಿಶೇಷ ಶ್ವಾನಂಗೆ ಉಂಟು, ಮಾನವಂಗೆ ಉಂಟೆ? ಶುನಕನೆಂಬ ಏಳಿಲವ ತಾಳುವ ಜನ್ಮಜನ್ಮಾಂತ್ರ. ಕಣ್ಣುಮರೆಯನು ಮಾಡಿದೆಯಯ್ಯ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.