Index   ವಚನ - 343    Search  
 
ಆಳುವ ಒಡೆಯಂಗೆ ಒಪ್ಪಿಸಿ ಕಾಳಗದೊಳು ಕೈತೊಲಗುವ[ನೆ] ಬಂಟನೆ? ಹೇಳುವರೆ ನುಡಿಯ ಸುಳ್ಳನು, ಹ್ಯಾವದ ಮಾತನ್ನು ವೇಳಗೆ ಬಾರದ ನೆಂಟನು, ಕಾಳಗದಿ ಕೈಮರೆದ ಬಂಟನು. ಆಳಿಗುಟ್ಟು ಇವರಿಬ್ಬರ ಸಂಗವು, ಸೂಳೆಯ ಸಂಸರ್ಗದಂತೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.