Index   ವಚನ - 357    Search  
 
ಕಸ್ತೂರಿ ರಕ್ತಗಳಲ್ಲವೆ ಪ್ರಸ್ತಾಯಕೆ ಅದಕೆ ಮುಂತು ಪರಿಮಳ ತುಂಬಿತು. ಹೊಸತುವೆ ವಚನದ ದೃಷ್ಟವು, ವಸ್ತುವೆ ನುಡಿಸಿದ ನುಡಿಗಳು. ಅಸ್ಥಿರವು ಸ್ಥಿರವಪ್ಪುದು ಅವರ ಕೃಪೆಯಲ್ಲಿ. ಮಸೆದ ಅಲಗಿನ ಮೈಗಳ [ಮಾಟ] ಲಿಂಗದ ಕೂಟ. ಸ್ವಸ್ತಿ ಎಂದು ಬೇಡಿದವಗೆ ವರವೀವುದಲ್ಲಯ್ಯ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.