ನಿತ್ಯರಯ್ಯ ನೀವೆಂದು ನಂಬಿದ ಭಕ್ತರು ಮುಕ್ತರು.
ವ್ಯರ್ಥರು ಅನಂತಕೋಟಿ ಮುನಿದರೆ ಏನಪ್ಪುದಯ್ಯ?
[ಎತ್ತು]ವರೆ ಕಿರಿಬೆರಳು ಡೊಂಕಲರಿಯದು.
ಸುತ್ತಮುತ್ತ ಕಿಚ್ಚನೊಟ್ಟಿದರೆ ಸುಡಲರಿಯದು.
ಬಿತ್ತುಬೆಳೆಬರಭಯರೋಗ ಬಂದರೆ,
ಸತ್ತವರಿಲ್ಲ ನಿಮ್ಮ ಸಾರಿದ ಮಹಾತ್ಮರು.
ಉತ್ತರ ಹಿಡಿದು ಸತ್ಯದಲ್ಲಿ ನಡೆದರೆ
ಮುಕ್ತಿಗೆ ಬರ ಬಂಬುದೇನಯ್ಯ?
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.