Index   ವಚನ - 371    Search  
 
ಭೂಮಿಯ ಹೊಯ್ದ ಹಸ್ತ ತಪ್ಪುವುದೆ? ಸ್ವಾಮಿಯ ದಯದ ನಡಿ ಹುಸಿವುದೆ? ಆ ಮಹಿಮರು ಮರ್ತ್ಯದೊಳು ಅಡಗಿಕೊಂಡಿಹರು. ನೇಮ[ದ] ಕಲಿ ತಗ್ಗುವತನಕ ಸ್ವಾಮ್ಯವ ತೋರರು. ಗ್ರಾಮಕ್ಕೆ ಹೊರಗಾದವರಿಗೆ ಸ್ವಾಮಿಯ ಕೃಪೆಗಳು. ರೋಮರೋಮಜ ಲಿಂಗ, ಬಂದನಾಗಲೆ ಕಾಮಿತನು. ಆ ಮಹಿಮನು ಆರೂಢಸ್ಥಲಕ್ಕೆ ಒಡೆಯನು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.