ಅಂದೆ ನುಡಿದರು ತುರುಕಸ್ಥಲವಿಡಿದು.
ಬಂದುದು ಹಿಂದು ಮುಂದಾಯಿತು,
ಮುಂದು ಹಿಂದಾಯಿತು
ಎಂದು ನುಡಿದರು ಕಾಲಜ್ಞಾನ.
ಹಿಂದು ಖಂಡಜ್ಞಾನ ಮುಂದು ಹೊಂದುವರು
ಹೊಂದಬಾರದೆಂದು ಬಂದರು,
ಅಲ್ಲ ಏನುತ ಅಗಮನ ಸೆಳೆವುತ
ಅಂದು ಲಕ್ಷದಾ ಮೇಲೆ ತೊಂಬತ್ತಾರು ಸಾವಿರದ
ಶಾಪ ಉಶ್ಯಾಪ.
ಕಂದಗೆ ಉಪದೇಶವಿತ್ತು ಕಲಮವ ಓದಿಸಿ
ಹಿಂದು ಮುಂದು ಒಂದೆ ಶರಣ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music Courtesy:
Video
TransliterationAnde nuḍidaru turukasthalaviḍidu.
Bandudu hindu mundāyitu,
mundu hindāyitu
endu nuḍidaru kālajñāna.
Hindu khaṇḍajñāna mundu honduvaru
hondabāradendu bandaru,
alla ēnuta agamana seḷevuta
andu lakṣadā mēle tombattāru sāvirada
śāpa uśyāpa.
Kandage upadēśavittu kalamava ōdisi
hindu mundu onde śaraṇa kāṇā
ele nam'ma kūḍala cennasaṅgamadēvayya.