Index   ವಚನ - 374    Search  
 
ಆಡಲರಿಯದ ಅಂಗ ಕುಣಿಗಾಯಿತ್ತು. ಉಣಲರಿಯಾದ ಅಗಳು ಹೆರವರಗಿ ಅಯಿತ್ತು. ಮಾಡಲರಿಯದೆ ಮಾಟ ಕಲ್ಲಿಗೆ ಆಯಿತ್ತು. ಕೂಡಲರಿಯದೆ ಕೂಟ ಕುತರ್ಕವಾಯಿತ್ತು. ನಾಡೋಳು ಹೇಲುವಯಿಗಳಿಗೆ ಕರ್ಪೂರಾವಾಯಿತ್ತು. ಮೂಡಿದ ಚನ್ನಪ್ರಭುವು ತುರೀಯ ಸ್ಥಲವಿಡಿದು ಬೇಡ ಬೇಡ ಮರೆ ಕೇಳಿ, ಕಾಲದ ಬೆಂಡತ್ತೇವ ಹಿ(ಸಿ?)ಡಿ ಆಟವಿದು ಅಗ್ರಗಣ್ಯ ಅನಾದಿಸಿದ್ಧಿ ಹೇಡಿಗೆ ಮುಂದೆ ಮುಕ್ತಿಯಿಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.