ಭಾಷೆ ಪಲ್ಲಟವಾದರೇನು, ಮಾತೆಲ್ಲ ಒಂದೆ.
ದೇಶ ಪಲ್ಲಟವಾದರೇನು, ಭೂಮಿಯೆಲ್ಲ ಒಂದೆ.
ಆಶ್ರಮ ಪಲ್ಲಟವಾದರೇನು, ಆಕಾಶವೆಲ್ಲ ಒಂದೆ.
ತಾಸು ಪಲ್ಲಟವಾದರೇನು, ದಿವರಾತ್ರಿಯೆಲ್ಲ [ಒಂದೆ],
ಚಂದ್ರಸೂರ್ಯರು ಕಾಣುವುದೆಲ್ಲ ಒಂದೆ.
ಏಸು ಕುಲ, ಕಾಯಕ ಬಿನ್ನವಾದರೇನು.
ಶರೀರಸೂತ್ರವೆಲ್ಲ ಒಂದೆ.
ಸಾವುದು ಎಲ್ಲ ಒಂದೆ, ಹುಟ್ಟುವುದು ಎಲ್ಲ ಒಂದೆ.
ಈಸುವುದು ಸಂಸಾರ ಸಾಗರ ದ್ವಂದ್ವ.
ಲೇಸು ಲೇಸು ನಿಮ್ಮನರಿಯವುದು ಬಹು ವಿಶೇಷ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.